ಒಂದೆಕ್ರೆಯಲ್ಲಿ 2000 ಕ್ಕೂ ಹೆಚ್ಚಿನ ಬಾಳೆ ಬೆಳೆಸುವ ವಿಧಾನ.
ಬಾಳೆ ಬೇಸಾಯ ವಿಧಾನದಲ್ಲಿ ಅಧಿಕ ಇಳುವರಿ ಪಡೆಯಲು ಅನುಕೂಲವಾಗುವ ಹಲವಾರು ಬೆಳೆ ತಾಂತ್ರಿಕತೆಗಳ ಬಗ್ಗೆ ಸಂಶೋಧನೆಗಳು ನಡೆಯುತ್ತಿವೆ. ರೈತರೂ ಇದನ್ನು ಅಳವಡಿಸಿ ಯಶಸ್ವಿ ಯಾಗುತಿದ್ದಾರೆ.ಅದರಲ್ಲಿ ಒಂದು ಅಧಿಕ ಸಾಂದ್ರ ಬೇಸಾಯ. ಈ ವಿಧಾನದಲ್ಲಿ ಎಕ್ರೆಗೆ 1230 ರಿಂದ 2000 ಗಿಡಗಳ ತನಕ ಹಿಡಿಸುವ ತಾಂತ್ರಿಕತೆ ಚಾಲ್ತಿಯಲ್ಲಿದೆ. ಇದರಲ್ಲಿ ಎಕ್ರೆಗೆ 45 ಟನ್ ನಿಂದ 70 ಟನ್ ತನಕವೂ ಇಳುವರಿ ಪಡೆಯಲು ಸಾಧ್ಯ. ಬಾಳೆಯ ಸಾಂಪ್ರದಾಯಿಕ ನಾಟಿ ವಿಧಾನದಲ್ಲಿ ಗಿಡದಿಂದ ಗಿಡಕ್ಕೆ , ಸಾಲಿನಿಂದ ಸಾಲಿಗೆ 6 ಅಡಿ ಅಂತರವನ್ನು ಪಾಲಿಸಲಾಗುತ್ತದೆ….