ಬಾಳೆಗೊನೆ ಯಾಕೆ ಹೀಗಾಗುತ್ತದೆ ಗೊತ್ತೇ?.
ಬಾಳೆಗೆ ಎಲ್ಲಾ ಗೊಬ್ಬರ, ನಿರ್ವಹಣೆ ಮಾಡಿದಾಗಲೂ ನಿಸ್ತೇಜವಾಗಿ ಎಲೆ ಹಳದಿಯಾಗುತ್ತಾ ಸಣಕಲು ಕಾಯಿಯ ಗೂನೆ ಬಿಡುವುದು, ಕಾಂಡದ ಭಾಗದಿಂದ ಅಥವಾ ಗೊನೆ ಭಾಗದಿಂದ ಮುರಿದು ಬೀಳುವುದು, ನಾವೆಲ್ಲಾ ಕಂಡ ಸಮಸ್ಯೆ. ಇದು ಗೊಬ್ಬರ ಅಥವಾ ಇನ್ಯಾವುದೇ ನಿರ್ವಹಣೆಯ ಕೊರತೆಯಿಂದ ಆಗುವುದಲ್ಲ. ಕೀಟ ಸಮಸ್ಯೆಯಿಂದ. ಯಾಕೆ ಹೀಗಾಗುತ್ತದೆ? ಒಂದು ಜಾತಿಯ ದುಂಬಿ ಬಾಳೆಯ ಗಡ್ಡೆಯಲ್ಲಿ ಸೇರಿ ಅಲ್ಲಿ ಮೊಟ್ಟೆ ಇಟ್ಟು ಹುಳವಾಗುತ್ತದೆ. ಈ ಹುಳವು ಮಧ್ಯದ ದಂಟಿನ ಮೂಲಕ ಮೇಲೇರಿ ದಂಟನ್ನು ಭಕ್ಷಿಸಿ ಬೆಳೆಯುತ್ತದೆ. ಮತ್ತೆ ಪುನಹ ಲಾರ್ವಾ…