ರಾಸಾಯನಿಕ ಮುಕ್ತ ಕೀಟ-ರೋಗ ನಿಯಂತ್ರಿಸುವ ವಿಧಾನಗಳು.
ಗುಡ್ಡಕ್ಕೆ ಗುಡ್ಡ ಅಡ್ದ ಇದ್ದೇ ಇದೆ. ಸ್ವಲ್ಪ ಯೋಚನೆ ಮಾಡಿದರೆ ಕೆಲವು ಸರಳ, ಸುರಕ್ಷಿತ ಬೆಳೆ ಸಂರಕ್ಷಣಾ ವಿಧಾನಗಳು ಗೊತ್ತಾಗುತ್ತವೆ. ಇದೇ ಸಿದ್ದಾಂತದಲ್ಲಿ, ಕೃಷಿ ಬೆಳೆಗಳ ಕೆಲವು ರೋಗ ಮತ್ತು ಕೀಟಗಳನ್ನು ನೈಸರ್ಗಿಕವಾಗಿ ರಾಸಾಯನಿಕ ಬಳಕೆ ಇಲ್ಲದೆ ನಿಯಂತ್ರಿಸಬಹುದು ಎಂದು ಕಂಡುಕೊಳ್ಳಲಾಗಿದೆ. ಇದನ್ನು ಜೈವಿಕ ಕೀಟ- ರೋಗ ನಿಯಂತ್ರಣ ಎನ್ನುತ್ತಾರೆ. ಇದು ಯಾರಿಗೂ ಯಾವ ರೀತಿಯಲ್ಲೂ ಅಪಾಯ ಇಲ್ಲದ ಜೀವಾಣುಗಳಾಗಿದ್ದು, ಎಲ್ಲದರ ಮೂಲ ಮಣ್ಣೇ ಆಗಿರುತ್ತದೆ. ಒಂದು ತೋಟದಲ್ಲಿ ಎಲ್ಲದಕ್ಕೂ ರೋಗ ಅಥವಾ ಕೀಟ ಸಮಸ್ಯೆ ಉಂಟಾಗಿ,ಕೆಲವು…