ಖರ್ಚು ಇಲ್ಲದ ಕೀಟ ನಿಯಂತ್ರಣ ಮತ್ತು ಅಧಿಕ ಫಲ.
ಇದು ಪ್ರಾಕೃತಿಕ ಕೃಷಿ ಪದ್ದತಿ. ಪ್ರಕೃತಿಯ ನಡೆಗೆ ಸರಿಯಾಗಿ ನಮ್ಮ ಹೆಜ್ಜೆ. ಇದಕ್ಕೆ ಖರ್ಚು ಇಲ್ಲ. ನಿಮ್ಮ ಆರೋಗ್ಯಕ್ಕೂ ಇದು ಒಳ್ಳೆಯದು. ಬೆಳೆಗಳು ಇದಕ್ಕೆ ತ್ವರಿತವಾಗಿ ಸ್ಪಂದಿಸಿ ನಿಮಗೆ ಅಧಿಕ ಇಳುವರಿಯ ಮೂಲಕ ಪ್ರತಿಫಲ ಕೊಡುತ್ತವೆ. ತೀರ್ಥಹಳ್ಳಿಯ ಶ್ರೀ. ಪುರುಷೋತ್ತಮರಾಯರು ಎಲ್ಲಾ ಕಡೆ ಹೇಳುತ್ತಿದ್ದ ಮಾತು ಇದು, “ನೀವು ನಿಮ್ಮ ಹೊಲದ ಮೂಲೆ ಮೂಲೆಗೂ ಹೋಗಿದ್ದೀರಾ?, ಮರಗಳ ಬಳಿ ಹೋಗಿ ಮಾತನಾಡಿದ್ದೀರಾ” ಇದನ್ನು ಕೇಳಿ ಜನ ನಗೆಯಾಡಿದ್ದೂ ಇರಬಹುದು. ಆದರೆ ಈ ವಿಚಾರ ತಿಳಿಯದೆ ಆಡಿದ ಮಾತು…