ಕೊಕ್ಕೋ ಬೆಳೆದರೆ ನೀರು ಕಡಿಮೆ ಸಾಕು.
ಪ್ರತೀಯೊಂದೂ ಬೆಳೆಗೂ ಅದಕ್ಕೆ ಸೂಕ್ತವಾದ ತಾಪಮಾನ ಪ್ರಾಮುಖ್ಯ ಅಂಶ. ಕಡಿಮೆಯೂ ಆಗಬಾರದು, ಹೆಚ್ಚೂ ಆಗಬಾರದು. ತಾಪಮಾನದ ಏರು ಪೇರನ್ನು ನಿಯಂತ್ರಿಸಲು ಸಸ್ಯಗಳಿಂದ ಮಾತ್ರ ಸಾಧ್ಯ. ಜೊತೆಗೆ ಮಣ್ಣಿನ ಫಲವತ್ತೆತೆ ಹೆಚ್ಚುತ್ತಾ ಇದ್ದರೆ ಮಾತ್ರ ಇಳುವರಿ ಸ್ಥಿರವಾಗಿರುವುದು. ಇದಕ್ಕೆಲ್ಲಾ ಸಹಾಯವಾದ ಬೆಳೆ ಕೊಕ್ಕೋ. ಇದು ತಾಪಮಾನ ಕಡಿಮೆ ಮಾಡುತ್ತದೆ. ಮಣ್ಣಿನ ಫಲವತ್ತತೆ ಹೆಚ್ಚಿಸುತ್ತದೆ. ನೀರಿನ ಆವೀಕರಣ ತಡೆಯುತ್ತದೆ. ನೆಲಕ್ಕೆ ಬಿಸಿಲು ಹೆಚ್ಚು ಬಿದ್ದಷ್ಟೂ ಹೆಚ್ಚು ಹೆಚ್ಚು ನೀರಾವರಿ ಮಾಡಬೇಕಾಗುತ್ತದೆ. ನೆಲದ ಮೇಲು ಭಾಗದಲ್ಲಿ ಸಸ್ಯದ ಹಸಿರು ಹೊದಿಕೆ ಇದ್ದಷ್ಟೂ…