ಕೊಕ್ಕೋ ಬೆಳೆದರೆ ಹಸುರು ಸೊಪ್ಪಿಗೆ ಬರವಿಲ್ಲ.
ಇತ್ತೀಚಿನ ದಿನಗಳಲ್ಲಿ ನಮಗೆ ಹಿಂದಿನಂತೆ ತೋಟಕ್ಕೆ ಹಸಿ ಸೊಪ್ಪು ಸದೆ ಹಾಕಲು ಸಂಪನ್ಮೂಲಗಳಿಲ್ಲ. ಕಾಡು ಇಲ್ಲ. ತರುವ ಮಜೂರಿಯೂ ಅಧಿಕ. ಕೊಕ್ಕೋ ಬೆಳೆ ತೋಟದಲ್ಲಿದ್ದರೆ ವರ್ಷಕ್ಕೆ ಸಾಕಷ್ಟು ಹಸುರು ಸೊಪ್ಪು ದೊರೆಯುತ್ತದೆ. ಈ ಸೊಪ್ಪಿನಲ್ಲಿ ಪೋಷಕಾಂಶಗಳು ಹೆಚ್ಚು ಇರುತ್ತವೆ. ರಾಸಾಯನಿಕ ಮೂಲದ ಸೂಕ್ಷ್ಮ ಪೋಷಕ, ಸುಣ್ಣ, ಮೆಗ್ನೀಶಿಯಂ ಬಳಸುವ ಖರ್ಚನ್ನು ಇದು ಉಳಿಸುತ್ತದೆ. ಹಸಿ ಸೊಪ್ಪು ಮಣ್ಣಿನ ಸೂಕ್ಷ್ಮಾಣು ಜೀವಿಗಳಿಗೆ ಒಳ್ಳೆಯ ಆಹಾರ. ಅಡಿಕೆ ಮರಗಳ ಮಧ್ಯಂತರದಲ್ಲಿ ಕೊಕ್ಕೋ ಬೆಳೆದಾಗ ಕೊಕ್ಕೋ ಸಸ್ಯವು ತನ್ನ ಪಾಲಿನ ಪೋಷಕಾಂಶವನ್ನು …