ಕೊಕ್ಕೋ ಗಿಡ – ಪ್ರೂನಿಂಗ್ ಮಾಡುವ ವಿಧಾನ.
ಕೊಕ್ಕೋ ಸಸ್ಯ ಬೆಳೆಯಲು ಬಿಟ್ಟರೆ ಮರವೇ ಆಗಬಹುದು. ಹಾಗೆಂದು ಯಾವ ಬೆಳೆಗೂ ತೊಂದರೆ ಇಲ್ಲವಾದರೆ ಅದನ್ನು ಅದರಷ್ಟಕ್ಕೇ ಬೆಳೆಯಲು ಬಿಡಿ. ಇಳುವರಿ ಹೆಚ್ಚುತ್ತದೆ. ಮಿಶ್ರ ಬೆಳೆಯಾಗಿ ಅಡಿಕೆ ತೋಟದಲ್ಲಿ ಬೆಳೆಸುವಾಗ ನಿಮ್ಮ ಒಡಾಟಕ್ಕೆ,ನೀರಾವರಿ, ಕೊಯಿಲು ಮತ್ತು ಇನ್ನಿತರ ಅನುಕೂಲಕ್ಕೆ ಸಮರ್ಪಕವಾಗಿ ಪ್ರೂನಿಂಗ್ ಮಾಡಬೇಕು. ಕೊಕ್ಕೋ ಬೆಳೆ ಕರಾವಳಿ, ಮಲೆನಾಡು, ಅರೆ ಮಲೆನಾಡು, ಹಾಗೆಯೇ ಅಡಿಕೆ ತೆಂಗು ಬೆಳೆಯುವ ಬಯಲು ನಾಡಿಗೂ ಇದು ಉತ್ತಮ ಅದಾಯದ ಬೆಳೆ. ಕೊಕ್ಕೋವನ್ನು ಅಡಿಕೆ, ತೆಂಗಿನ ತೋಟದಲ್ಲಿ ಮಿಶ್ರ ಬೆಳೆಯಾಗಿ ಬೆಳೆಯಬಹುದು. ಕೊಕ್ಕೋ…