ತೆಂಗಿನ ಮರಕ್ಕೆ ಗೊಬ್ಬರವೇ ಬೇಕಾಗಿಲ್ಲ.
ಪ್ರಕೃತಿಯ ವೈಚಿತ್ರ್ಯ ನೋಡಿ. ಕಾಡಿನಲ್ಲಿರುವ ಒಂದು ಸಸಿ ಬೆಳೆಯಬೇಕಾದರೆ ಮತ್ತೊಂದು ದೊಡ್ದ ಮರದ ಆಸರೆ ಬೇಕು. ನಿರ್ದಿಷ್ಟ ಹಂತಕ್ಕೆ ಬೆಳೆದ ಮೇಲೆ ಅದಕ್ಕೆ ಯಾವ ಆಸರೆಯೂ ಬೇಡ. ಅದೇ ತನ್ನನ್ನು ದಷ್ಟ ಪುಷ್ಟವಾಗಿಸುತ್ತಾ ಬೆಳೆಸುತ್ತದೆ. ಅದೇ ತತ್ವ ನಾವು ಬೆಳೆಸುವ ಬೆಳೆಗಳಿಗೆ ಯಾಕೆ ಅನ್ವಯವಾಗಲಾರದು? ಆಗಿಯೇ ಆಗುತ್ತದೆ. ಕೃಷಿಯಲ್ಲಿ ನಮ್ಮ ಬೇಡಿಕೆಗಳು ದೊಡ್ದದು. ಸಸ್ಯದ ಅವಶ್ಯಕತೆಗೆ ಬೇಕಾದುದನ್ನು ನಾವು ಕಬಳಿಸುತ್ತೇವೆ. ಉರುವಲಿಗೆ ಮತ್ತು ಇನ್ನಿತರ ಬಳಕೆಗೆ ನಾವು ತೆಂಗಿನ ಸರ್ವಾಂಗವನ್ನೂ ಉಪಯೋಗಿಸುತ್ತೇವೆ. ಅದಕ್ಕೆ ಮಾತ್ರ ಉಪವಾಸ….