ಶುದ್ಧ ತೆಂಗಿನೆಣ್ಣೆಯಲ್ಲಿದೆ – ಅಪರಿಮಿತ ಆರೋಗ್ಯ ಗುಣಗಳು
ಪ್ರಕೃತಿ ಸೃಷ್ಟಿಸಿದ ಹಲವಾರು ಔಷಧೀಯ ಸಸ್ಯ , ಮೂಲಿಕೆಗಳಲ್ಲಿ ತೆಂಗು ಒಂದು. ಇದು ಇಂದು ನಿನ್ನೆಯ ವಿಚಾರ ಅಲ್ಲ. ಅನಾದಿ ಕಾಲದಿಂದಲೂ ಇದ್ದದ್ದು. ಆದರೆ ಗೊತ್ತೀದ್ದೋ ಗೊತ್ತಿಲ್ಲದೆಯೋ ನಾವು ಬಳಸುವುದು ಕಡಿಮೆ ಮಾಡುತ್ತಿದೇವೆ.ತೆಂಗಿನ ಎಣ್ಣೆ ತಿಂದವರಿಗೆ ರೋಗ ಇಲ್ಲ. ಕೊಬ್ಬರಿ ಎಣ್ಣೆ ಎಂಬುದು ಹಸುವಿನ ತುಪ್ಪಕ್ಕೆ ಸರಿಸಾಟಿಯಾದ ವಸ್ತು ಎನ್ನುತ್ತಾರೆ. ಇದು ಸಸ್ಯಜನ್ಯ ಎಣ್ಣೆಯಾಗಿದ್ದು, ತುಪ್ಪಕ್ಕಿಂತಲೂ ಮಿಗಿಲಾದ ಔಷಧೀಯ ಗುಣವನ್ನು ಪಡೆದಿದೆ. ನಮ್ಮಲ್ಲಿ ಈಗಲೂ ಹಳ್ಳಿಯ ಜನ ಕಣ್ಣು ತುರಿಕೆ, ಮೈ ತುರಿಕೆ ಆದರೆ ಆ ಭಾಗಕ್ಕೆ…