ಎಳನೀರು ತೆಗೆಯಲು ಕಷ್ಟವಿಲ್ಲದ – ಗಿಡ್ಡ ತಳಿಯ ತೆಂಗು.
ಎಳನೀರು ತೆಗೆಯುವುದೆಂದರೆ ಮರ ಹತ್ತುವುದು, ಇಳಿಸುವುದೇ ತೊಂದರೆ. ಅದರೆ ಈ ಗಿಡ್ದ ತಳಿಯ ತೆಂಗು ಬೆಳೆಸಿದರೆ ಅದು ವರ್ಷಕ್ಕೆ ಹೆಚ್ಚೆಂದರೆ 1 ಅಡಿ ಮಾತ್ರ ಬೆಳೆಯುವುದು. ಎಳನೀರಿಗೆ ಮುಂದೆ ಭಾರೀ ಬೇಡಿಕೆ ಬರಲಿದೆ. ಇನ್ನು ಕೆಲವೇ ವರ್ಷಗಳಲ್ಲಿ ಉಳಿದ ಸಿಂಥೆಟಿಕ್ ಪಾನೀಯಗಳ ಸ್ಥಾನವನ್ನು ಇದು ಕೆಳಕ್ಕೆ ಹಾಕಿ ಸರ್ವಮಾನ್ಯವಾಗಲಿದೆ. ಆದ ಕಾರಣ ತೆಂಗು ಬೆಳೆಯುವವರು ಬರೇ ಕಾಯಿಗಾಗಿ ಮಾತ್ರ ತೆಂಗು ಬೆಳೆಯದಿರಿ. ಕಾಯಿಗೆ ಕೆಲವು ಸಮಯ ಬೇಡಿಕೆ, ಬೆಲೆ ಕಡಿಮೆಯಾಗಬಹುದು. ಆದರೆ ಎಳನೀರಿಗೆ ಎಂತಹ ಸಂಕಷ್ಟ ಕಾಲದಲ್ಲೂ…