
ಅಡಿಕೆ ಬೆಳೆಗಾರರೇ- ಮೈಲುತುತ್ತೆ ಪರೀಕ್ಷೆ ಹೀಗೆ ಮಾಡಿ.
ಬೋರ್ಡೋ ದ್ರಾವಣ ತಯಾರಿಕೆಗೆ ಬಳಸುವ ಮೈಲುತುತ್ತೆ ಸರಿ ಇಲ್ಲದ ಕಾರಣ ಅಡಿಕೆ ಕೊಳೆರೋಗ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆಯೇ ಎಂಬ ಸಂಶಯ ಇದೆ. ಅದಕ್ಕೆ ಪುಷ್ಟಿ ಕೊಡುವಂತೆ ಹಿಂದೆ ಕೆಲವೇ ಕೆಲವು ತಯಾರಿಕೆಗಳು ಇದ್ದರೆ ಈಗ ಹಲವಾರು ತಯಾರಕರು, ಹಲವಾರು ಬ್ರಾಂಡುಗಳು ಬಂದು ರೈತರಿಗೆ ಸಂಪೂರ್ಣವಾಗಿ ದ್ವಂದ್ವ ಉಂಟಾಗಿದೆ. ಈ ದ್ವಂದ್ವ ಬೇಡ. ನೀವೇ ಇದನ್ನು ಪರೀಕ್ಷಿಸಿ ಬಳಸಿ. ಕಾಪರ್ ಸಲ್ಫೇಟ್ ಸರಬರಾಜುದಾರರ ಬಗ್ಗೆ ಅಂತರ್ ಜಾಲದಲ್ಲಿ ಹುಡುಕಿ. ಹಲವಾರು ಜನ ಇದನ್ನು ಒದಗಿಸುವರು ಸಿಗುತ್ತಾರೆ.ದರ ಸಮರವೂ ಇರುತ್ತದೆ….