ನಯಾ ಪೈಸೆ ಖರ್ಚಿಲ್ಲದ ಕೃಷಿ ಹೀಗೆ.
ದೇಸೀ ಹಸುವೊಂದಿದ್ದರೆ ನೀವು ಯಾವ ಗೊಬ್ಬರದಂಗಡಿಯವನನ್ನೂ ಸಾಕಬೇಕಾಗಿಲ್ಲ. ಹಸುವಿನ ಸಗಣಿ, ಅದರ ಮೂತ್ರ, ಮಜ್ಜಿಗೆ, ಹಾಲು, ಶುಂಠಿ ರಸ, ಬ್ರಹ್ಮಾಸ್ತ್ರ, ಅಗ್ನ್ಯಾಸ್ತ್ರ, ನೀಮಾಸ್ತ್ರ ಮುಂತಾದ ಸ್ಥಳೀಯವಾಗಿ ದೊರೆಯುವ ಮೂಲ ವಸ್ತುಗಳಿಂದ ಬೆಳೆಯ ಸರ್ವಾಂಗೀಣ ಅವಶ್ಯಕತೆಯನ್ನೂ ಪೂರೈಸಬಹುದು. ಎಲ್ಲವೂ ಬದಲಾಗಲಿದೆ : ಕೆಲವೇ ವರ್ಷಗಳಲ್ಲಿ ಈ ದೇಶದಲ್ಲಿರುವ ಸರಕಾರೀ ಸ್ವಾಮ್ಯದ ರಸಗೊಬ್ಬರ ತಯಾರಿಕಾ ಸಂಸ್ಥೆಗಳು ಬಾಗಿಲು ಹಾಕಲಿವೆ. ಲಕ್ಷಾಂತರ ಜನ ನಿರುದ್ಯೋಗಿಗಳಾಗಲಿದ್ದಾರೆ. ಕೊಟ್ಯಾಂತರ ರೂಪಾಯಿ ವ್ಯವಹಾರದ ರಸಗೊಬ್ಬರ, ಕೀಟ ನಾಶಕ, ರೋಗನಾಶಕ ಹಾಗೂ ಇನ್ನಿತರ ಬೆಳೆ ಸಂರಕ್ಷಕ ತಯಾರಕರು…