ನೆಟ್ಟು ಬೆಳೆಸುವ ಹುಲ್ಲು ವೇಗವಾಗಿ ಬೆಳೆಯಬೇಕೇ? ಇದು ಸೂಕ್ತ ಬೆಳೆ ಕ್ರಮ.
ಹಸು ಸಾಕಣಿಕೆ ಮಾಡುವವರು ಮೇವಿನ ಉದ್ದೇಶಕ್ಕಾಗಿ ಹಸಿರು ಹುಲ್ಲು ಬೆಳೆಸುವುದು ಸಾಮಾನ್ಯ. ಹಸಿಹುಲ್ಲು ಬೆಳೆಸಿದರೆ ಬೇಕಾದಾಗ ಬೇಕಾದಷ್ಟು ಮೇವು ಪಡೆಯಬಹುದು.ನೆಟ್ಟು ಬೆಳೆಸುವ ಈ ಹುಲ್ಲಿನಸಸ್ಯ ಧೀರ್ಘಾವಧಿಯಾಗಿದ್ದು, ಯಾವ ರೀತಿಯಲ್ಲಿ ಬೆಳೆದರೆ ಅದನ್ನು ಧೀರ್ಘ ಕಾಲದ ತನಕ ಉಳಿಸಿಕೊಂಡು ಕಠಾವು ಮಾಡುತ್ತಿರಬಹುದು ಎಂಬ ಬಗ್ಗೆ ವಿಸೃತ ಮಾಹಿತಿ ಇಲ್ಲಿದೆ. ಹಸಿಹುಲ್ಲು ಪಶು ಸಂಗೋಪನೆಯಲ್ಲಿ ಬಹಳ ಮಹತ್ವ ಪಡೆದಿದೆ. ಹಸುಗಳು ಇರಲಿ, ಮೇಕೆಗಳಿರಲಿ, ಎಮ್ಮೆಗಳಿರಲಿ, ಅವುಗಳಿಗೆ ಕೊಡಬೇಕಾದ ಪ್ರಾಮುಖ್ಯ ಆಹಾರ ಎಂದರೆ ಹಸುರು ಮೇವು. ಇದು ಪಶುಗಳಿಗೆ ದೇಹ ಪೋಷಣೆಗೆ…