ಯಾವ ಬೆಳೆಗೆ ಯಾವ ಕಳೆ ನಾಶಕ ಬಳಸಬೇಕು?
ಎಲ್ಲಾ ಬೆಳೆಗೂ ಒಂದೇ ಕಳೆ ನಾಶಕ ಅಲ್ಲ. ಬೆಳೆ ಮತ್ತು ಕಳೆಯನ್ನು ಅವಲಂಭಿಸಿ ಬೇರೆ ಬೇರೆ ಕಳೆ ನಾಶಕಗಳನ್ನು ಬಳಸಿ ಕಳೆ ನಿಯಂತ್ರಣ ಮಾಡಬೇಕಾಗುತ್ತದೆ. ಕಳೆಗಳನ್ನು ಹುಟ್ಟಿದ ಕಳೆಗಳು ಮತ್ತು ಹುಟ್ಟಲಿರುವ ಕಳೆಗಳು ಎಂದು ಎರಡು ವಿಭಾಗ ಮಾಡಬಹುದು. ಹುಟ್ಟಿದ ಕಳೆಗಳೆಂದರೆ ನೆಲದಲ್ಲಿ ಹಾಸಿಕೊಂಡು ಇರುತ್ತವೆ. ಹುಟ್ಟಲಿರುವ ಕಳೆಗಳು ನೆಲದಲ್ಲಿ ಬೀಜದ ರೂಪದಲ್ಲಿ ಇರುತ್ತವೆ. ಬೀಜದ ರೂಪದಲ್ಲಿರುವ ಕಳೆಗಳು ಉಳುಮೆ ಮಾಡಿ ಬಿತ್ತನೆ ,ಆಗಿ ನೀರು ಗೊಬ್ಬರ ಕೊಟ್ಟ ತಕ್ಷಣ ಹುಟ್ಟುತ್ತವೆ. ಇದನ್ನು ಬೀಜವೇ ಮೊಳಕೆ ಬಾರದಂತೆ…