ತೆಂಗು – ಲೋಕಲ್ ತಳಿಗಳಲ್ಲಿ ಉತ್ತಮ ಬೀಜ ಆಯ್ಕೆ.
ಮೂಲದಿಂದಲೂ ನಾವು ತೆಂಗು ಬೆಳೆಸುವಾಗ ಸ್ಥಳೀಯ ತಳಿಯನ್ನೇ ಆಯ್ಕೆ ಮಾಡುತ್ತಾ ಬಂದಿದ್ದೇವೆ. ಎಲ್ಲಿ ಉತ್ತಮ ತೆಂಗಿನ ಸಸಿ ಇದೆಯೋ ಅಲ್ಲಿಂದ ತೆಂಗಿನ ಬೀಜ ತಂದು ಅದನ್ನು ಬೀಜಕ್ಕಿಟ್ಟು ಅದು ಸಸಿಯಾದ ನಂತರ ನೆಡುವುದು ನಮ್ಮ ಕ್ರಮವಾಗಿದೆ. ಈಗಿನ ಆಧುನಿಕ ಹೈಬ್ರೀಡ್ ತಾಂತ್ರಿಕತೆಯ ಬೀಜೋತ್ಪಾದನೆಗೂ ಮೂಲ ಇದೇ. ನೈಸರ್ಗಿಕ ಮಿಶ್ರ ಪರಾಗಸ್ಪರ್ಶ: ಸ್ಥಳಿಯ ತಳಿಗಳು ನೈಸರ್ಗಿಕವಾಗಿ ಪರಾಗಸ್ಪರ್ಶಕ್ಕೆ ಒಳಗಾಗಿ ಆದವುಗಳು. ಇಂದು ನಮ್ಮಲ್ಲಿರುವ 95% ತೆಂಗಿನ ತೋಟಗಳು ಇದೇ ವಿಧಾನದಲ್ಲಿ ಆಯ್ಕೆ ಮಾಡಿದ್ದೇ ಆಗಿದೆ. ಇಂತಲ್ಲಿ ಕೆಲವು ಉತ್ತಮ…