ವಿಷ ಮಿಶ್ರಿತ -ನೇಂದ್ರ ಬಾಳೆ ಹಣ್ಣು
ಊಟದ ಹೊತ್ತಾಗಿತ್ತು. ಕೆ ಎಸ್ ಆರ್ ಟಿ ಸಿ ಬಸ್ ನವರ ಊಟದ ಹೋಟೆಲಿನಲ್ಲಿ ಉಣ್ಣಲು ಮನಸ್ಸು ಕೇಳಲಿಲ್ಲ. ಬಾಳೆ ಹಣ್ಣು ತಿನ್ನೋಣ ಎಂದು ಗುಂಡ್ಯದಲ್ಲಿ ಒಂದು ಅಂಗಡಿಯಲ್ಲಿ ಬಾಳೆ ಹಣ್ಣು ಕೇಳಿದರೆ ಅಂಗಡಿಯವನು ಹೇಳುತ್ತಾನೆ, ಈಗ ನೇಂದ್ರ ಬಿಟ್ಟರೆ ಬೇರೆ ಬಾಳೆ ಹಣ್ಣೇ ಇಲ್ಲ. ಒಂದೆಡೆ ಮಂಗಗಳ ಕಾಟ. ಇನ್ನೊಂದೆಡೆ ಬೆಲೆ ಇಲ್ಲ. ಎಲ್ಲರೂ ಹೆಚ್ಚು ಬೆಲೆ ದೊರೆಯುತ್ತದೆ ಎಂದು ನೇಂದ್ರವನ್ನೇ ಬೆಳೆಯುತ್ತಾರೆ. ಇದರಿಂದಾಗಿ ಸ್ಥಳೀಯ ಬಾಳೆ ಕಾಯಿಯೇ ಕಡಿಮೆಯಾಗಿದೆ. ಫೋರೇಟ್ ಹಾಕಿದರೆ ಮಂಗಸಹ ಬರುವುದಿಲ್ಲವಂತೆ….