ಅಡಿಕೆಗಿಡ ನೆಡುವಾಗ ಟ್ರೆಂಚ್ ಪದ್ದತಿ ಬೇಡ- ಗಿಡ ಸೊರಗುತ್ತದೆ.
ಅಡಿಕೆ, ಮುಂತಾದ ಸಸ್ಯಗಳಿಗೆ ತಂತು ( Fiber roots) ಬೇರು ಮಾತ್ರ ಇರುತ್ತದೆ. ಈ ತಂತು ಬೇರುಗಳಲ್ಲಿ ಮತ್ತೆ ಕವಲುಗಳು ಒಡೆದು ಬೇರು ವ್ಯೂಹ ರಚನೆಯಾಗುತ್ತದೆ. ಈ ಬೇರುಗಳು ತುಂಬಾ ಮೃದುವಾಗಿರುತ್ತವೆ. ಹೆಚ್ಚಿನ ತೇವ, ಅಧಿಕ ಬಿಸಿಯನ್ನು ತಡೆದುಕೊಳ್ಳಲಾರವು. ಆದ ಕಾರಣ ನಾವು ಟ್ರೆಂಚ್ ಪದ್ದತಿಯಲ್ಲಿ ಅಡಿಕೆ ಸಸಿ ನೆಟ್ಟರೆ ಅದರ ಬೇರುಗಳಿಗೆ ತೊಂದರೆಯಾಗಿ ಬೆಳವಣಿಗೆಗೆ ಅನನುಕೂಲವಾಗುತ್ತದೆ. ಸಸ್ಯಗಳ ಬೆಳವಣಿಗೆಗೆ ಬೇರುಗಳೇ ಸರ್ವಾಧಾರ. ಬೇರುಗಳ ರಕ್ಷಣೆ ಮತ್ತು ಅವುಗಳ ಪ್ರಸರಣಕ್ಕೆ ಎಷ್ಟು ಅನುಕೂಲ ಮಾಡಿಕೊಡುತ್ತೇವೆಯೋ ಅಷ್ಟು ಆ…