ತೋಟದಲ್ಲಿ ಫಸಲು ಕಡಿಮೆ- ರೋಗ ಹೆಚ್ಚಾಗಲು ಕಾರಣ ಏನು? .
ಹೆಚ್ಚಿನ ಫಸಲು ಪಡೆಯಲು ಕೇವಲ ಗೊಬ್ಬರ,ನೀರಾವರಿ ಮಾಡಿದರೆ ಸಾಲದು. ಬೆಳೆಯ ಉತ್ಪಾದನೆ ಮತ್ತು ಆರೋಗ್ಯಕ್ಕಾಗಿ ಭೂಮಿಯನ್ನು ಸದಾ ಸುಸ್ಥಿತಿಯಲ್ಲಿ ಇಟ್ಟುಕೊಳ್ಳಲೇ ಬೇಕು. ನೀರು ಹೆಚ್ಚಾಗುವುದರಿಂದ ಮಣ್ಣಿನ ಆರೋಗ್ಯ ಕೆಡುತ್ತದೆ. ಮಣ್ಣಿನ ಸ್ವಾಸ್ತ್ಥ್ಯ ಸುಧಾರಣೆಗೆ ನಾವು ಗೊಬ್ಬರ ಹಾಕುತ್ತೇವೆ, ಉಳುಮೆ ಮಾಡುತ್ತೇವೆ. ಆದರೆ ಇದರಿಂದ ಮಣ್ಣಿನ ಆರೋಗ್ಯ ಸುಧಾರಿಸುತ್ತದೆ ಎಂಬುದು ಭ್ರಮೆ. ಮಣ್ಣಿನಲ್ಲಿ ಸಮರ್ಪಕ ಹಬೆಯಾಡುವಿಕೆ, ಉಷ್ಣತೆಯ ಸಮತೋಲನ, ಇದ್ದರೆ ಮಾತ್ರ ನಾವು ಕೊಡುವ ನೀರು, ಗೊಬ್ಬರ ಫಲ ಕೊಡುತ್ತದೆ. ಬಹಳ ಜನ ನನ್ನ ತೋಟದಲ್ಲಿ ನೀರು ನಿಲ್ಲುವುದಿಲ್ಲ,…