ಹಲ್ಲಿಲ್ಲದ್ದ ರೈತನಿಗೆ ಕಡಲೆ ತಿನ್ನಿಸುವ ವೆಬಿನಾರ್ ಗಳು.
ಮಾರ್ಚ್ ತಿಂಗಳ ನಂತರ ಬಂದ ಒಂದು ಹೊಸ ಅವತಾರ, ವೆಬಿನಾರ್ ಗಳು. ಬೇರೆ ಕ್ಷೇತ್ರಗಳ ವಿಷಯ ನಮಗೆ ಅನಗತ್ಯ. ಆದರೆ ಕೃಷಿ ಕ್ಷೇತ್ರದಲ್ಲಿ ಈ ವೆಬಿನಾರ್ಗಳ ಬಗ್ಗೆ ಕೆಲವೊಂದು ವಿಚಾರಗಳನ್ನು ರೈತರಿಗೆ ತಿಳಿಯಬಯಸುತ್ತೇವೆ. ಇದು ರೋಗಿ ಬಯಸಿದ್ದೂ ಹಾಲು, ವೈದ್ಯ ಕೊಟ್ಟದ್ದೂ ಹಾಲು ಎಂಬಂತಾಗಿದೆ. ಮೇಲುನೋಟಕ್ಕೆ ಇದು ರೈತರ ಸೇವೆ ಎಂದು ಕಂಡರೂ ಇದರಲ್ಲಿ ಕೆಲವು ಪೇಪರ್ ವರ್ಕ್ ಮತ್ತು ಹಣ ಖರ್ಚು ಮಾಡುವ ದಂಧೆ ಇರಲೂ ಬಹುದು. ವೆಬಿನಾರ್ ಎಂದರೆ ಕೇವಲ ಸಂಬಂಧಿಸಿದವರು ಮಾತ್ರ ತಮ್ಮ…