ರೈತರ ನಷ್ಟಕ್ಕೆ ಪರಿಹಾರ ಇದ್ದರೆ ಇದೊಂದೇ
ತಾವು ಮಾಡದ ತಪ್ಪಿಗೆ ರೈತರು ಕಷ್ಟ ಅನುಭವಿಸುತ್ತಿದ್ದಾರೆ. ದ್ರಾಕ್ಷಿ ಬೆಳೆಗಾರರು ತಮ್ಮ ದ್ರಾಕ್ಷಿಯನ್ನು ತಿಪ್ಪೆಗೆ ಸುರಿದಿದ್ದಾರೆ. ಟೊಮೇಟೋ ಬೆಳೆದವರು ಕೊಯಿಲು ಮಾಡಲೇ ಇಲ್ಲ. ಇನ್ನು ಅನನಾಸು, ಕಲ್ಲಂಗಡಿ ಬಹುತೇಕ ಎಲ್ಲಾ ಬೆಳೆ ಬೆಳೆದವರೂ ತಲೆಗೆ ಕೈ ಇಟ್ಟು ಕುಳಿತಿದ್ದಾರೆ. ಯಾರಿಗೂ ವಿಮೆ ಇಲ್ಲ. ಇವರ ನಷ್ಟಕ್ಕೆ ಪರಿಹಾರ ಕೊಡುವುದು ಹೇಗೆ? ಸರಕಾರ ಸಾಲ ಮನ್ನಾ ಮಾಡಬಹುದೇ? ಬೆಳೆ ನಷ್ಟ ಕೊಡಬಹುದೇ? ಯಾವುದಕ್ಕೂ ಸರಕಾರದ ಖಜಾನೆಯಲ್ಲಿ ದುಡ್ಡು ಬೇಕಲ್ಲವೇ? ಇನ್ನು ಒಂದೆರಡು ತಿಂಗಳಲ್ಲಿ ಎಲ್ಲಾ ಚಿತ್ರಣ ಗೊತ್ತಾಗುತ್ತದೆ. ಸರಕಾರೀ…