
ಪಶು ಆಹಾರ ನೀವೇ ಮಾಡಿಕೊಳ್ಳಿ-ಲಾಭವಿದೆ.
ಹೈನುಗಾರಿಕೆ ಮಾಡುತ್ತಿದ್ದಿರಾ? ನೀವು ನಿಮ್ಮ ಹೈನು ರಾಸುಗಳಿಗೆ ಹುಲ್ಲು ಬಿಟ್ಟು ಬೇರೆ ಎಲ್ಲವನ್ನೂ ತರುವುದು ಹೊರಗಡೆಯಿಂದ. ಇದು ನಿಮ್ಮ ಆ ವೃತ್ತಿಯನ್ನು ಹೆಚ್ಚು ಸಮಯ ಮುನ್ನಡೆಸಲು ಬಿಡುವುದಿಲ್ಲ. ಕಾರಣ ನಿಮ್ಮ ಆದಾಯದ ಬಹುಪಾಲು ಅವರ ಕೈ ಸೇರುತ್ತದೆ. ಅವರು ಬೇಗ ಮೇಲೇರುತ್ತಾರೆ. ನೀವು ಹೈನು ಗಾರಿಕೆ ಬೇಡ ಎಂದು ಹಸು ಮಾರಾಟ ಮಾಡಿ ಮತ್ತೆ ಹಿಂದಿನ ಸ್ಥಿತಿಗೇ ಬರುತ್ತೀರಿ. ಕೊಂಡು ತರುವ ಪಶು ಆಹಾರ: ಮಾರುಕಟ್ಟೆಯಲ್ಲಿ ತರಾವಳಿಯ ಪಶು ಆಹಾರಗಳಿವೆ. ಸ್ಪರ್ಧೆಗಾಗಿ ದರ ವೆತ್ಯಾಸಗಳೂ ಇವೆ. ಹಾಲು…