ಸ್ವಸ್ಥ ಆರೋಗ್ಯಕ್ಕೆ ಬೇಕು – ಸುರಕ್ಷಿತ ಆಹಾರ.
ನಾವು ತಿನ್ನುವ ಆಹಾರ ಸುರಕ್ಷಿತವಾಗಿದ್ದರೆ ಎಲ್ಲವೂ ಕ್ಷೇಮ. ಇಂದು ಆಗುತ್ತಿರುವ ಕೆಲವು ಅನಾಹುತಗಳಿಗೆ ಮೂಲ ಕಾರಣ ನಮ್ಮ ಆಹಾರ ಅಭ್ಯಾಸಗಳು. ಇದನ್ನು ಸ್ವಲ್ಪ ಸ್ವಲ್ಪವೇ ಸರಿ ಮಾಡಿಕೊಂಡು ಬದುಕುವುದನ್ನು ಕಲಿಯೋಣ. ಈ ದಿನದಿಂದಲೇ ಅದನ್ನು ಪ್ರಾರಂಭಿಸೊಣ. ಕೃಷಿ ಕ್ಷೇತ್ರದಲ್ಲಿ ಆಹಾರ ಉತ್ಪಾದನೆಯಾಗುವಾಗಲೇ ಅದು ಆರೋಗ್ಯಕ್ಕೆ ಕಂಠಕವಾದ ಒಳಸುರಿಗಳಿಂದ ಕಲುಷಿತವಾಗುತ್ತದೆ. ಇನ್ನು ದಾಸ್ತಾನು ಕ್ಷೇತ್ರದಲ್ಲಿ ಇನ್ನಷ್ಟು ಅದು ಕಲುಷಿತವಾಗುತ್ತದೆ. ಮಾರಾಟ ಕ್ಷೇತ್ರದಲ್ಲಿ ಎಲ್ಲಾ ಕಡೆಯಲ್ಲೂ ಕಲುಷಿತಗೊಂಡು ಅದು ಗ್ರಾಹಕನಿಗೆ ದೊರೆಯುತ್ತದೆ. ಅದು ಒಟ್ಟಾರೆ ಯಾಗಿ ಮನುಕುಲದ ದೇಹಾರೋಗ್ಯಕ್ಕೆ ಹಾನಿಕಾರಕ…