ಕಾಡು- ಮನುಕುಲದ ರಕ್ಷಕ- ತಿಳಿದಿರಲಿ.
ಕಾಡು ಮತ್ತು ಜೀವ ವೈವಿಧ್ಯ ಜೊತೆ ಜೊತೆಯಾಗಿ ಸಮತೋಲನದಲ್ಲಿದ್ದರೆ ಎಲ್ಲವೂ ಕ್ಷೇಮವಾಗಿರುತ್ತದೆ. ಇತ್ತೀಚಿನ ವರ್ಷಗಳಲ್ಲಿ ಈ ಸಮತೋಲನ ಹಳಿ ತಪ್ಪಲಾರಂಭಿಸಿದೆ. ಇದಕ್ಕೆ ಪ್ರಕೃತಿಯು ಮನುಕುಲದ ಮೇಲೆ ತನ್ನ ಪ್ರತಿರೋಧವನ್ನೂ ಒಡ್ಡುತ್ತಿದೆ. ಇದು ನಮಗೆಷ್ಟು ಅರಿವಿಗೆ ಬಂದಿದೆಯೋ ತಿಳಿಯದು. ಆದರೆ ಪ್ರಕೃತಿ ಮಾತ್ರ ತನ್ನ ಮೇಲೆ ಏನೇ ಘಾಸಿಯಾದರೂ ಅದಕ್ಕೆ ಪ್ರತಿಕ್ರಿಯೆ ತೋರಿಸುತ್ತದೆ. ಇಡೀ ಪ್ರಪಂಚದಲ್ಲಿ ಬುದ್ಧಿ ಉಳ್ಳ ಜೀವಿಗಳಾದ ಮಾನವ ಇದನ್ನು ಅರ್ಥ ಮಾಡಿಕೊಂಡು ನಮ್ಮಿಂದಾದ ತಪ್ಪನ್ನು ಸರಿಪಡಿಸಲು ಶ್ರಮಿಸಬೇಕಾಗಿದೆ. ಮಾರ್ಚ್ 21 ನೇ ದಿನಾಂಕವನ್ನು ವಿಶ್ವ…