ಅಡಿಕೆ ಮರಗಳ ಶಿರ ಒಣಗಲು ಕಾರಣ ಮತ್ತು ಪರಿಹಾರ.
ಅಡಿಕೆ ಮರಗಳಲ್ಲಿ ಶಿರ ಒಣಗಿ ಕೊಳೆಯುವ ಸಮಸ್ಯೆ ಬಹಳ ಹಿಂದಿನಿಂದಲೂ ಇದ್ದದ್ದು. ಕೆಲವು ವರ್ಷ ಹೆಚ್ಚಾಗುತ್ತದೆ. ಕೆಲವು ವರ್ಷ ಗೌಣವಾಗಿರುತ್ತದೆ. ಈ ವರ್ಷ ಇದು ಹೆಚ್ಚಿನ ಪ್ರಮಾಣದಲ್ಲಿ ಕಾಣಿಸುತ್ತಿದ್ದು, ಬೆಳೆಗಾರರು ಯಾಕೆ ಹೀಗಾಗುತ್ತಿದೆ ಎಂದು ಗಾಬರಿಯಾಗಿದ್ದರೆ. ಇದು ಒಂದು ಶಿಲೀಂದ್ರ ರೋಗವಾಗಿದ್ದು, ಸರಿಯಾದ ನಿರ್ವಹಣೆ ವಿಧಾನಗಳಿಂದ ಬಾರದಂತೆ ಮಾಡುವುದು ಸಾಧ್ಯ.ಇದನ್ನು ತೆಂಡೆ ರೋಗ ಎಂದು ಕೆಲವರು ಹೇಳುವುದಿದೆ. ತೆಂಡೆ, ಅಥವಾ ಚೆಂಡೆ ರೋಗ ಎಂದರೆ ಮಲೆನಾಡಿನಲ್ಲಿ ಕಂಡುಬರುವ ಹಿಡಿಮುಂಡಿಗೆ ಅಥವಾ ಬಂದ್ ರೋಗ. ಇದು ಶಿರ ಕೊಳೆಯುವ…