ವೀಳ್ಯದೆಲೆ ಬೆಳೆಗಾರರ ಸಮಸ್ಯೆಗೆ ಇಲ್ಲಿದೆ ಉತ್ತರ.
ದೈನಂದಿನ ಆದಾಯ ಕೊಡಬಲ್ಲ ವೀಳ್ಯದೆಲೆಗೆ, ನೋಟದ ಮೇಲೆ ಮಾರುಕಟ್ಟೆ ನಿಂತಿದೆ.ಉತ್ತಮ ನೋಟದ ಎಲೆಗಳು ರೋಗ ರಹಿತ ಬಳ್ಳಿಗಳಿಂದ ಮಾತ್ರ ದೊರೆಯಬಲ್ಲುದು. ವೀಳ್ಯದೆಲೆಯು ಒಂದು ಪ್ರಮುಖತೋಟಗಾರಿಕಾ ಬೆಳೆಯಾಗಿದ್ದು. ಕರ್ನಾಟಕದಲ್ಲಿಇದರ ವಿಸ್ತೀರ್ಣ 8288 ಹೆಕ್ಟರ್ ಹಾಗೂ ಇಳುವರಿ 153600 ಮೆ.ಟನ್. ಎಲೆಗಳು ಉತ್ಪತ್ತಿಯಾಗುತ್ತಿದೆ.ಈ ಬೆಳೆಯ ಬೆಳೆವಣಿಗೆಯ ಹಂತದಲ್ಲಿ ಅನೇಕ ರೋಗಗಳು ಬಾಧೆಗೊಳಗಾಗುತ್ತವೆ. ಅವುಗಳಲ್ಲಿ ಬುಡಕೊಳೆ ರೋಗ, ದುಂಡಾಣು ಎಲೆ ಚುಕ್ಕೆ ರೋಗ ಮತ್ತುಚಿಬ್ಬುರೋಗ ಪ್ರಮುಖ ರೋಗಗಳಾಗಿವೆ. ಅವುಗಳಲ್ಲಿ ದುಡಾಂಣು ಎಲೆಚುಕ್ಕೆ ರೋಗವು ಇತ್ತೀಚಿಗೆ ಎಲ್ಲಾ ಕಡೆ ಭಾರೀ ನಷ್ಟವನ್ನು ಉಂಟು…