ಹೊಲಕ್ಕೆ ಈ ಸೊಪ್ಪುಗಳನ್ನು ಹಾಕಿದರೆ ಗೊಬ್ಬರ ಉಳಿಸಬಹುದು.
ಮೆದು ಸ್ವರೂಪದ ಹಸುರು ಸೊಪ್ಪು ಅಧಿಕ ಸಾರಗಳನ್ನು ಒಳಗೊಂಡಿರುತ್ತದೆ. ಹೆಚ್ಚಾಗಿ ದ್ವಿದಳ ಜಾತಿಯವು ಉತ್ಕೃಷ್ಟ. ಇಂತಹ ಸಸ್ಯಗಳಲ್ಲಿ ಕೆಲವು ಅಲ್ಪಾವಧಿಯ ಸಸ್ಯಗಳು ಮತ್ತು ಕೆಲವು ಧೀರ್ಗಾವಧಿಯ ಮರಮಟ್ಟುಗಳು. ಇದನ್ನು ನಾವು ಗುರುತಿಸಿ ಬೆಳೆಸಿ ಬಳಸಬೇಕು. ಇವು ಮಣ್ಣಿಗೆ ಹೊಸ ಜೀವ ಚೈತನ್ಯವನ್ನು ಕೊಡುತ್ತವೆ. ಬೆಳೆ ಉತ್ತಮವಾಗುತ್ತದೆ. ಬಹಳ ಜನ ತಮ್ಮ ಹೊಲಕ್ಕೆ ಬೇರೆ ಬೇರೆ ಸಾವಯವ ಗೊಬ್ಬರಗಳನ್ನು ಬಳಕೆ ಮಾಡುತ್ತಾರೆ. ಕೆಲವರು ಒಣ ತರೆಗೆಲೆ ಹಾಗೂ ಒಣ ತ್ಯಾಜ್ಯಗಳನ್ನು ಬಳಕೆ ಮಾಡುತ್ತಾರೆ. ಇದರಲ್ಲಿ ಹಾನಿ ಏನೂ ಇಲ್ಲವಾದರೂ…