
ಬೇಗ ಬೆಳೆಯುವ, ನಾರು ಇಲ್ಲದ ಹರಿವೆಯ ತಳಿಗಳು.
ಹರಿವೆ ಸೊಪ್ಪು ಒಂದು ಪೌಷ್ಟಿಕ ತರಕಾರಿ. ಇದನ್ನು ಅಮರಾಂತಸ್,(Amaranthus sp) ದಂಟಿನ ಸೊಪ್ಪು ಎಂಬ ಹೆಸರುಗಳಿಂದ ಕರೆಯಲಾಗುತ್ತದೆ. ದೇಹದ ರಕ್ಷಣೆಗೆ ಬೇಕಾದ ಜೀವ ಸತ್ವಗಳನ್ನು ಒದಗಿಸುವ ಸೊಪ್ಪು ತರಕಾರಿ. ಸಾವಿರಾರು ವರ್ಷಗಳಿಂದಲೂ ಇದು ನಮ್ಮ ದೇಶದಲ್ಲಿ ಬೆಳೆಯಲ್ಪಡುತ್ತಿತ್ತು. ಭಾರತವೇ ಇದರ ಮೂಲ ಎನ್ನಬಹುದು. ಬೇರೆ ದೇಶಗಳಲ್ಲೂ ಇದು ಬೆಳೆಯಲ್ಪಡುತ್ತಿದೆ. ಹರಿವೆಯಲ್ಲಿ ನೂರಾರು ಪ್ರಬೇಧಗಳಿವೆ. ದಂಟಿನ ಉದ್ದೇಶಕ್ಕೆ, ಸೊಪ್ಪಿನ ಉದ್ದೇಶಕ್ಕೆ, ಬೀಜದ ಉದ್ದೇಶಕ್ಕೆ ಮತ್ತೆ ಕೆಲವು ಕಳೆ ಸಸ್ಯಗಳಾಗಿಯೂ ಇವೆ. ವಾಣಿಜ್ಯ ತಳಿಗಳು: ದೇಶದ…