ನಮ್ಮ ಬೆಳೆಗಳಲ್ಲಿದೆ ರೋಗ ನಿರೋಧಕ ಶಕ್ತಿ.
ಜಗತ್ತನ್ನೇ ಅಂಜಿಸಿದ ಕೊರೋನಾ ವೈರಸ್ ಖಾಯಿಲೆಗೆ ಭಾರತೀಯರು ಸ್ವಲ್ಪ ಮಟ್ಟಿಗೆ ನಿರೋಧಕ ಶಕ್ತಿಯನ್ನು ಹೊಂದಿದವರೆಂದರೆ ತಪ್ಪಾಗಲಾರದು. ಇಲ್ಲಿನ ಜನ ಶೀತ ವಲಯದ ಜನಕ್ಕಿಂತ ಸ್ವಲ್ಪ ಗಡಸು. ಇಲ್ಲಿ ವಾತಾವರಣ, ಆಹಾರ ಪದ್ದತಿ, ಸಹಜವಾಗಿಯೇ ಮಾನವರಿಗೆ ರೋಗ ನಿರೋಧಕ ಶಕ್ತಿ ಇರುತ್ತದೆ. ಹಿಂದೆ ದೊಡ್ದ ರೋಗ ( ಸಿಡುಬು) ಬಂದ ಸಮಯದಲ್ಲಿ ಒಂದೊಂದು ಕುಟುಂಬದಲ್ಲಿ ಕೆಲವರು ಸತ್ತೇ ಹೋಗಿದ್ದರೂ ಕೆಲವರು ಬದುಕಿ ಉಳಿದಿದ್ದರು. ಅದು ಮಾರಾಣಾಂತಿಕವಾಗಿದ್ದರೂ ಸಹ ಮಾನವನ ಅಂತರ್ಗತ ನಿರೋಧಕ ಶಕ್ತಿಯಿಂದ ಕೆಲವರು ಬದುಕಿ ಉಳಿದ…