ಕಪ್ಪು ಗೋಧಿ- ಇದು ಬಲು ಅಪರೂಪ
ಅಕ್ಕಿಯಲ್ಲಿ ಕಪ್ಪಕ್ಕಿ ಬಗ್ಗೆ ಬಾರೀ ಪ್ರಚಾರ ಇದೆ. ಕಪ್ಪಕ್ಕಿ ಬೆಳೆಯುವ ಕೆಲವು ರೈತರು ನಮ್ಮಲ್ಲಿದ್ದಾರೆ. ಅದೇ ರೀತಿಯಲ್ಲಿ ಸಾಂಪ್ರದಾಯಿಕ ಕಪ್ಪು ಗೋಧಿ ತಳಿಯೂ ಇದೆ. ಇದನ್ನು ಉಳಿಸಿ ಸಂರಕ್ಷಿಸುವ ಕೆಲಸವನ್ನು ಕೆಲವು ರೈತರು ಮಾಡಿದ್ದಾರೆ. ಅವರಲ್ಲಿ ಒಬ್ಬರು ಮಧ್ಯಪ್ರದೇಶದ ಬೋರೇಂದ್ರ ಸಿಂಗ್. ಸುಮಾರು 25 ವರ್ಷಗಳಿಂದ ಇವರು ಕಪ್ಪು ಗೋಧಿಯನ್ನು ಬೆಳೆಸುತ್ತಾ ಬಂದಿದ್ದಾರಂತೆ. ಇದು ಒಂದು ಸಾಂಪ್ರದಾಯಿಕ ಅಪರೂಪದ ತಳಿಯಾಗಿದ್ದು, ದೇಶದಲ್ಲಿ ಬಹಳ ಅಪರೂಪದಲ್ಲಿ ಅಲ್ಲಲ್ಲಿ ಕಾಣಸಿಗುತ್ತದೆ. ನಮ್ಮಲ್ಲಿ ಮಾನವನ ನಾಗರೀಕತೆಯ ಕಾಲದಿಂದ ಲಾಗಾಯ್ತು ಬೆಳೆಯಲಾಗುತ್ತಿದ್ದ ಅಹಾರ…