ಕಳೆ ಗಿಡಗಳನ್ನು ಬೇರು ಸಮೇತ ತೆಗೆಯಬಹುದಾದ ಸಾಧನ.
ಕೃಷಿ ಹೊಲದಲ್ಲಿ ಯಾವಾಗಲೂ ಕಳೆ ಸಸ್ಯಗಳು ಸಹಜವಾಗಿ ಹುಟ್ಟಿಕೊಳ್ಳುತ್ತಲೇ ಇರುತ್ತವೆ. ಬೆಳೆದಂತೆ ಅದನ್ನು ಬೇರು ಸಹಿತ ತೆಗೆಯಲು ಸಾಧ್ಯವಾಗುವುದಿಲ್ಲ. ಅಂಥಹ ಕಳೆ ಸಸ್ಯಗಳನ್ನು ಬೇರು ಸಹಿತ ಯಾವ ಶ್ರಮದ ಅಗತ್ಯವೂ ಇಲ್ಲದೆ ತೆಗೆಯಬಹುದಾದ ಸಾಧನವನ್ನು ಸಾಗರದ ಹೆಗಡೆ ಡೈನಾಮಿಕ್ಸ್ ಪ್ರೈ ಲಿಮಿಟೆಡ್ ಇವರು ಅಭಿವೃದ್ಧಿಪಡಿಸಿದ್ದಾರೆ. ಕೆಲವು ಸಾಧಾರಣ ಗಾತ್ರದ ಗಿಡಗಳನ್ನು ಕೀಳಲು ಹಾರೆ, ಗುದ್ದಲಿ ಮುಂತಾದ ಸಾಧನಗಳು ಬೇಕಾಗಿಲ್ಲ. ಇವುಗಳಿಂದ ಕೀಳಿಸುವ ಶ್ರಮಕ್ಕಿಂತ ತುಂಬಾ ಕಡಿಮೆ ಶ್ರಮದಲ್ಲಿ ಯುಕ್ತಿ ಆಧಾರಿತ ಸಾಧನದಲ್ಲಿ ಅದನ್ನ್ನು ತೆಗೆಯಬಹುದು. ಮುಖ್ಯವಾಗಿ…