ತೆಂಗಿನ ಸಸಿ ನೆಡುವಾಗ ಎಲ್ಲಿ ಯಾವ ಅಂತರ ಸೂಕ್ತ?
ತೆಂಗನ್ನು 30 ಅಡಿ ಅಂತರದಲ್ಲೂ ಬೆಳೆಯಬಹುದು. ಹಾಗೆಯೇ 15 ಅಂತರದಲ್ಲೂ ಬೆಳೆಯಬಹುದು. ಅದು ಸ್ಥಳ ಮತ್ತು ಪರಿಸ್ಥಿತಿ ಯನ್ನು ಹೊಂದಿಕೊಂಡು. ತೆಂಗನ್ನು ಪ್ಲಾಂಟೇಶನ್ ಆಗಿ ಬೆಳೆಯಲಾಗುತ್ತದೆ. ಅದೇ ರೀತಿಯಲ್ಲಿ ಮನೆ ಹಿತ್ತಲ ಗಿಡವಾಗಿಯೂ, ರಸ್ತೆ ದಾರಿ ಮಗ್ಗುಲಿನ ಬೆಳೆಯಾಗಿಯೂ ಬೆಳೆಯಲಾಗುತ್ತದೆ. ಇದು ಮುಖ್ಯ ಬೆಳೆಯೂ ಹೌದು. ಮಿಶ್ರ ಬೆಳೆಯೂ ಹೌದು. ತೆಂಗನ್ನು ಬೆಳೆಸುವಾಗ ಎಲ್ಲಿ ಬೆಳೆಯುತ್ತೀರಿ ಅದರ ಮೇಲೆ ಅಂತರವನ್ನು ನಿರ್ಧರಿಸಿಕೊಳ್ಳಬೇಕು. ಪ್ಲಾಂಟೇಶನ್ ಬೆಳೆಯಾಗಿ: ತೆಂಗಿನ ತೋಟ ಮಾಡುತ್ತೀರೆಂದಾದರೆ ಅಲ್ಲಿ ಪಾಲಿಸಬೇಕಾದ ಅಂತರ ಭಿನ್ನ. ಮರದಿಂದ ಮರಕ್ಕೆ…