ಹೀರೇ ಕಾಯಿಯಲ್ಲಿ ಅಧಿಕ ಇಳುವರಿ ಪಡೆಯುವುದು ಹೀಗೆ.
ಹೀರೇ ಕಾಯಿಗೆ ಪ್ರಮುಖ ತರಕಾರಿ ಬೆಳೆಯಾಗಿದ್ದು, ದೇಶದ ಎಲ್ಲಾ ಕಡೆ ಬೆಳೆಯಲ್ಪಡುತ್ತದೆ. ವ್ಯವಸ್ಥಿತವಾಗಿ ಬೆಳೆದರೆ ಇದರಲ್ಲಿ ಒಳ್ಳೆಯ ಆದಾಯ ಇದೆ. ಇದು ಮಳೆಗಾಲ ಮತ್ತು ಬೇಸಿಗೆ ಕಾಲಗಳಲ್ಲೆಲ್ಲಾ ಬೆಳೆಯಲ್ಪಡುವ ತರಕಾರಿ. ಇದು ಅತ್ಯಧಿಕ ಪೋಷಕಾಂಶಗಳನ್ನು ಪಡೆದ ತರಕಾರಿಯಾಗಿದೆ.. ಹೇಗೆ ಬೆಳೆಯುವುದು: ಎಲ್ಲಾ ನಮೂನೆಯ ಮಣ್ಣಿನಲ್ಲೂ ಬೆಳೆಯಬಹುದಾದ ಬೆಳೆ ಇದು. ಮಣ್ಣನ್ನು ಸಡಿಲ ಮಾಡಿಕೊಂಡು ಬೆಳೆಯಬೇಕು. ಮಣ್ಣಿನಲ್ಲಿ ನೀರು ಹಿಡಿದಿಟ್ಟುಕೊಳ್ಳುವ ಗುಣ ಇರಬೇಕು. ಮಣ್ಣು ಮತ್ತು ಸಾವಯವ ಗೊಬ್ಬರ ಸಮ ಪ್ರಮಾಣದಲ್ಲಿ ಇರಬೇಕು. ಮಳೆಗಾಲದಲ್ಲಿ ಎತ್ತರಿಸಿದ ಸಾಲು ಉತ್ತಮ….