
‘ಮೃದು ಕಾಂಡ ಕಸಿ’ ಎಲ್ಲರೂ ಮಾಡಬಹುದಾದ ಸರಳ ಕಸಿ.
ಈಗ ನಿಮ್ಮಲ್ಲಿ ಹಲಸಿನ ಕಾಯಿ ಇದೆ. ಮಾವಿನ ಹಣ್ಣಿನ ಗೊರಟು ಇದೆ. ಹಾಗೆಯೇ ತಿಂದ ಇತರ ಹಣ್ಣು ಹಂಪಲುಗಳೂ ಇರಬಹುದು. ಅದನ್ನು ಎಲ್ಲೆಂದರಲ್ಲಿ ಬಿಸಾಡಬೇಡಿ. ಪ್ಲಾಸ್ಟಿಕ್ ತೊಟ್ಟೆಗೆ ಹಾಕಿ ಸಸಿ ಮಾಡಿಕೊಳ್ಳಿ. ಯಾವಾಗಲಾದರೂ ಒಂದು ಉತ್ತಮ ಹಲಸು, ಮಾವು ಹಣ್ಣು ಹಂಪಲು, ಕೊಡುವ ಮರ ಸಿಕ್ಕರೆ ಅಲ್ಲಿಂದ ಒಂದೆರಡು ಗೆಲ್ಲು ತಂದು ಸಸಿ ಮಾಡಿಕೊಳ್ಳಬಹುದು. ಕಸಿ ಕಲಿಯುವುದೇ ಹಾಗೆ. ಯಾರನ್ನೂ ಅವಲಂಭಿಸದೇ ಬರೇ ಓದಿ, ನೋಡಿ ಮಾಡಬಹುದಾದ ಕಸಿ ವಿಧಾನ ಎಂದರೆ ಮೃದು ಕಾಂಡ ಕಸಿ. ಇದರಲ್ಲಿ…