ಅಡಿಕೆ ಬೆಳೆಗಾರರೇ ನೀವು ಇದನ್ನು ಒಪ್ಪುತ್ತೀರಾ?
ಒಬ್ಬ ವೈದ್ಯನ ಮಗ ವೈದ್ಯನಾದರೆ ಅವನ ವೃತ್ತಿ ಕ್ಷಮತೆಯಲ್ಲಿ ಇರುವ ಹಿಡಿತ ಬೇರೆಯವರಲ್ಲಿ ಬರಲು ಸ್ವಲ್ಪ ಕಷ್ಟವಾಗುತ್ತದೆ. ಇದನ್ನು ನೀವು ಗಮನಿಸಿರಬಹುದು.ಇದು ಬರೇ ವೈದ್ಯ ವೃತ್ತಿಗೆ ಮಾತ್ರವಲ್ಲ ಎಲ್ಲಾ ವೃತ್ತಿ ಕ್ಷೇತ್ರಕ್ಕೂ ಹುಟ್ಟು ಸಹಜವಾದ ಅನುಭವ ಅರ್ಜಿತ ಅನುಭವಕ್ಕಿಂತ ಮಿಗಿಲಾಗಿರುತ್ತದೆ. ಅಡಿಕೆ ಬೆಳೆಗೆ ಸಲಹೆ ಕೊಡುವವರು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದಾರೆ. ಅಡಿಕೆ ಬೆಳೆಯನ್ನು ಹುಟ್ಟಿನಿಂದ ಕಂಡವರಿಗಿಂತ ಹೆಚ್ಚಿನ ಜ್ಞಾನವನ್ನು ಇವರು ಸಂಪಾದಿಸಿದವರಂತೆ ವರ್ತಿಸುತ್ತಾರೆ. ಬೆಳೆ ಬಗ್ಗೆ ಉಪದೇಶ ಮಾಡುತ್ತಾರೆ. ಒಂದು ಬದಿಯಲ್ಲಿ ಅವರ ಈ ಎಲ್ಲಾ ಸೇವೆಯ…