ಅಡಿಕೆ ಮರಗಳಿಗೆ ಸುಣ್ಣ ಬಳಿದರೆ ಇಳುವರಿ ಹೆಚ್ಚುತ್ತದೆ.
ಅಡಿಕೆ ಮರಗಳ ಕಾಂಡವನ್ನು ಬಿಸಿಲಿನ ಘಾಸಿಯಿಂದ ರಕ್ಷಿಸಿದರೆ ಧೀರ್ಘಾವಧಿ ತನಕ ಫಸಲು ಕೊಡುತ್ತದೆ. ವರ್ಷ ವರ್ಷವೂ ಗಾಳಿಗೆ ಮರ ಬೀಳುವುದರಿಂದಾಗಿ ಉಂಟಾಗುವ ನಷ್ಟ ಕಡಿಮೆಯಾಗಿ ಇಳುವರಿ ಸ್ಥಿರವಾಗಿರುತ್ತದೆ . ಮರದ ಕಾಂಡಕ್ಕೆ ಸುಣ್ಣ ಬಳಿದರೆ ಕಾಂಡ ಹಾಳಾಗದೆ ಅಯುಸ್ಸು ಹೆಚ್ಚಿ ಇಳುವರಿಯು ಹೆಚ್ಚುತ್ತದೆ. ದಕ್ಷಿಣಾಯನ ಮುಗಿಯುವ ಮಕರ ಸಂಕ್ರಮಣದ ತನಕ ಸೂರ್ಯನ ಬಿಸಿಲು ಮರದ ಕಾಂಡಕ್ಕೆ ನೇರವಾಗಿ ಹೊಡೆದು ಮರ ಕಾಂಡ ಸೂರ್ಯ ಕಿರಣದ ಘ್ಹಾಸಿಗೆ ಒಳಗಾಗುತ್ತದೆ. ಅಂತಹ ಮರಗಳು ಬೇಗ ಹಾಳಾಗುತ್ತವೆ. ಒಂದು ವರ್ಷ ನೇರ…