ಹ್ಯೂಮಸ್ ಹೆಚ್ಚಿಸಿ ಅಧಿಕ ಫಸಲು ಪಡೆಯಿರಿ.
ಎಲ್ಲರೂ ಹ್ಯೂಮಸ್ ಎಂಬ ಶಬ್ಧವನ್ನು ಕೇಳಿರುತ್ತಾರೆ.ಆದರೆ ಇದು ಏನು, ಹೇಗೆ ಉತ್ಪಾದನೆಯಾಗುತ್ತದೆ ಎಂಬ ಬಗ್ಗೆ ಹೆಚ್ಚಿನವರಿಗೆ ತಿಳಿದಿಲ್ಲ.ಹ್ಯೂಮಸ್ ಎಂದರೆ ಮಣ್ಣಿನಲ್ಲಿ ಜೀವ ರಾಸಾಯನಿಕ ಕ್ರಿಯೆಯಿಂದ ಉತ್ಪಾದನೆಯಾಗುವ ಆಕಾರ ರಹಿತ, ಒಂದು ವಸ್ತು. ಇದು ಮಣ್ಣಿನ ಸ್ಥಿತಿಯನ್ನು ಫಲವತ್ತಾಗಿ ಇಡಲು ನೆರವಾಗುವ ಅಂಶ. ನಾವು ಮಣ್ಣಿಗೆ ಸೇರಿಸುವ ಕೃಷಿ ತ್ಯಾಜ್ಯಗಳು, ಮಣ್ಣಿನಲ್ಲೇ ಇರುವ ಕೆಲವು ಜೀವಿಗಳು ತಮ್ಮ ಆಯುಸ್ಸನ್ನು ಮುಗಿಸಿ ಮತ್ತೆ ಮಣ್ಣಿಗೇ ಸೇರುತ್ತವೆ. dead plant and animals and ferns etc. ಅದು ಮಣ್ಣಿನಲ್ಲಿ ವಿಘಟನೆಯಾಗುವಾಗ…