
ಈರುಳ್ಳಿ ಬೆಳೆಸುವವರಿಗೆ- ಇಲ್ಲಿದೆ ವಿಶೇಷ ತಳಿಗಳು!
ಈರುಳ್ಳಿ ನಮ್ಮ ದೇಶದ ಪ್ರಮುಖ ತರಕಾರಿ ಬೆಳೆ. ಇದನ್ನು ಬಲ್ಬ್ ಕ್ರಾಪ್ ಎನ್ನುತ್ತಾರೆ. ಪ್ರಪಂಚದಲ್ಲೇ ಈರುಳ್ಳಿ ಬೆಳೆಯುವ ಎರಡನೇ ದೊಡ್ಡ ದೇಶ ನಮ್ಮದು. ಮಹಾರಾಷ್ಟ್ರ ಮೊದಲ ಸ್ಥಾನದಲ್ಲೂ ಕರ್ನಾಟಕ ಎರಡನೇ ಅತೀ ದೊಡ್ಡ ಈರುಳ್ಳಿ ಬೆಳೆಯುವ ರಾಜ್ಯ. ಈರುಳ್ಳಿ ತಳಿ ಅಭಿವೃದ್ದಿಯಲ್ಲಿ ಕರ್ನಾಟಕದ ಪಾಲು ಅತೀ ದೊಡ್ದದು. ಇದೇ ಕಾರಣಕ್ಕೆ ಭಾರತೀಯ ಕೃಷಿ ಅನುಸಂಧಾನ ಪರಿಷತ್ತು ,ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯನ್ನು ಈರುಳ್ಳಿ ತಳಿ ಅಭಿವೃದ್ದಿಗೆ ನಿಯೋಜಿಸಿದೆ. ಇಲ್ಲಿ ಅರ್ಕಾ ಹೆಸರಿನ ಸುಮಾರು 10 ಬೇರೆ ಬೇರೆ…