
ಬೇಸಿಗೆಯಲ್ಲಿ ನೀರಿನ ಕೊರತೆಗೆ ಪರಿಹಾರ ಕಂಡುಕೊಂಡ ಕೃಷಿಕ.
ಬೇಸಿಗೆಯ ಕಾಲದಲ್ಲಿ ಎಲ್ಲರೂ ನೀರಿನ ಕೊರತೆ ಅನುಭವಿಸುತ್ತಾರೆ. ಆದರೆ ಇಲ್ಲೊಬ್ಬರು ರೈತರು ಮಳೆಗಾಲದಲ್ಲಿ ಮಳೆ ನೀರನ್ನು ಒಂದೆಡೆ ಕೂಡಿಹಾಕಿದ್ದಾರೆ. ಅದನ್ನು ಮಣ್ಣು ಸ್ಪಂಜಿನಂತೆ ಹೀರಿಕೊಂಡು ಬೇಸಿಗೆಯ ಸಮಯದುದ್ದಕ್ಕೂ ತಗ್ಗು ಪ್ರದೇಶಕ್ಕೆ ಬಿಡುಗಡೆ ಮಾಡುತ್ತದೆ. ಹಾಗಾಗಿ ಇವರಿಗೆ ಬೇಸಿಗೆಯಲ್ಲಿ ನೀರಿನ ಕೊರತೆ ಉಂಟಾಗಿಲ್ಲ. ಬೇಸಿಗೆಯಲ್ಲಿ ಎಲ್ಲಾ ಕೃಷಿಕರಿಗೂ ನೀರಿನದ್ದೇ ಸಮಸ್ಯೆ. ಬೆಳೆಗಳು ನೀರನ್ನು ಹೆಚ್ಚು ಅಪೇಕ್ಷಿಸುತ್ತವೆ. ಮಣ್ಣು ಹೆಚ್ಚು ನೀರು ಕುಡಿಯುತ್ತದೆ. ಆದರೆ ಮೂಲಗಳಲ್ಲಿ ನೀರಿನ ಸಂಗ್ರಹ ಕಡಿಮೆಯಾಗಿರುತ್ತದೆ. ಕೊಳವೆ ಬಾವಿಗಳೂ ಸಹ ಕೈಕೊಡುವುದು ಇದೇ ಸಮಯದಲ್ಲಿ. ಇದಕ್ಕೆ…