ಗುಣಮಟ್ಟದ ಹಲಸು ಪಡೆಯುವ ವಿಧಾನ.
ಹಲಸಿನ ಮರದಲ್ಲಿ ಮಿಡಿ ಕಾಯಿಗಳು ಬಿಡಲು ಪ್ರಾರಂಭವಾಗಿವೆ. ಇನ್ನು ಬರುವ ಚಳಿ, ಒಣ ಹವೆಯಿಂದ ಇನ್ನೂ ಸ್ವಲ್ಪ ಕಾಯಿ ಬಿಡಬಹುದು. ಬಿಟ್ಟ ಎಲ್ಲಾ ಕಾಯಿಗಳನ್ನೂ ಉಳಿಸಬೇಡಿ. ಒಂದು ಮರಕ್ಕೆ ಇಂತಿಷ್ಟು ಎಂಬ ಲೆಕ್ಕಾಚಾರದಲ್ಲಿ ಕಾಯಿ ಉಳಿಸಿಕೊಂಡರೆ ಗುಣಮಟ್ಟದ ಹಲಸಿನ ಕಾಯಿ ಪಡೆಯಬಹುದು. ಹಲಸಿನ ಮರದಲ್ಲಿ ಮಿಡಿಗಳು ಸಾಕಷ್ಟು ಬಿಟ್ಟರೆ ಎಲ್ಲಾ ಕಾಯಿಗಳೂ ಒಳ್ಳೆಯ ರೀತಿಯಲ್ಲಿ ಬೆಳೆವಣಿಗೆ ಹೊಂದುವುದಿಲ್ಲ. ಕೆಲವು ಚಪ್ಪಟೆಯಾಗುತ್ತದೆ. ಕೆಲವು ಮಾತ್ರ ಪುಷ್ಟಿಯಾಗುತ್ತದೆ. ಚಪ್ಪಟೆ ಇಲ್ಲದ ಎಲ್ಲಾ ಭಾಗವೂ ಏಕಪ್ರಕಾರವಾಗಿ ಉಬ್ಬಿರುವ ಹಲಸಿನ ಕಾಯಿಯಲ್ಲಿ ಸೊಳೆಗಳು…