ಕಲ್ಪರಸ – ನೀವು ಇನ್ನೂ ಕುಡಿದಿಲ್ಲವೇ – ಇಲ್ಲಿಗೆ ಹೋಗಿ.
ತೆಂಗಿನ ಮರದ ಹೂ ಗೊಂಚಲಿನಲ್ಲಿ ಒಂದು ರಸ (SAP) ಇದೆ. ಈ ರಸದಿಂದಲೇ, ಎಳನೀರು, ತೆಂಗಿನ ಕಾಯಿ ಆಗುತ್ತದೆ. ಎಳನೀರು, ಕಾಯಿ ಆಗುವುದಕ್ಕೂ ಮುನ್ನ ನಾವು ಇದನ್ನು ಸವಿಯಬಹುದು. ಅದೂ ಪರಿಶುದ್ಧವಾಗಿ. ಅದುವೇ ಕಲ್ಪರಸ.. ನಮ್ಮ ಪೂರ್ವಜರ ಕಾಲದಿಂದಲೂ ತೆಂಗಿನ ಮರ, ತಾಳೆ ಮರ, ಈಚಲು ಮರದ ಹೂ ಗೊಂಚಲಿನ ಅಮೃತ ಸಮಾನವಾದ ರಸದ ಮಹತ್ವವನ್ನು ತಿಳಿಯಲಾಗಿತ್ತು. ಆದನ್ನು ತೆಗೆಯುವ ಕ್ರಮ ಮತ್ತು ದಾಸ್ತಾನು ವಿಧಾನಗಳಿಂದ ಅದು ಕಲ್ಪರಸವಾಗದೆ ಅಮಲು ಬರಿಸುವ ಸೇಂದಿ ಎಂಬ ಹೆಸರನ್ನು ಪಡೆದಿತ್ತು….