ರಾಜ್ಯದ ಹೊಸ ಭೂ ಸುಧಾರಣಾ ಕಾಯಿದೆ ಟುಸ್…
ಹಸುರು ಶಾಲು ಹೊದ್ದು, ರೈತರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದ, ನಮ್ಮೆಲ್ಲರ ಮುಖ್ಯಮಂತ್ರಿಗಳು ಮಾರ್ಚ್ ತಿಂಗಳಲ್ಲಿ ವಿದೇಶಕ್ಕೆ ಹೋಗಿ ಬಂದು ರೈತರಿಗೆ ಒಂದು ಶಾಕ್ನ ಸೂಚನೆ ಕೊಟ್ಟಿದ್ದರು. ಆ ಶಾಕ್ ಈಗ ರಾಜ್ಯದ ರೈತಾಪಿವರ್ಗದ ಮೇಲೆಲ್ಲಾ ಹರಿಬಿಡಲಾಗಿದೆ. ಇದು ದುಡ್ಡಿಗಾಗಿ ಅಷ್ಟೇ: ಅಂದು ( ಮಾರ್ಚ್ 15/2020 ) ಕರ್ನಾಟಕದ ಮುಖ್ಯಮಂತ್ರಿಗಳು ಕೃಷಿಕರಲ್ಲದವರು ಮತ್ತು ಅಧಿಕ ಆದಾಯದ ಮೂಲ ಹೊಂದಿದವರು ಕೃಷಿ ಭೂಮಿ ಕೊಳ್ಳಲು ಅನುಕೂಲವಾಗುವ ಶಾಸನ ತಿದುಪಡಿಯ ಪ್ರಸ್ತಾಪ ಮಾಡಿದ್ದರು. ಅದಕ್ಕೆ ದೇವರ ದಯೆ ಇರಲಿಲ್ಲವೆಂದು ಕಾಣಿಸುತ್ತದೆ….