ಸುಣ್ಣ ಹಾಕುತ್ತಿರಾ? ಈ ಮಾಹಿತಿಯನ್ನುಮೊದಲು ತಿಳಿದಿರಿ.
ಸುಣ್ಣ ಹಾಕುವುದರಿಂದ ಮಣ್ಣಿನ ರಸಸಾರ ತಟಸ್ಥ ಸ್ಥಿತಿಯತ್ತ ತಲುಪುತ್ತದೆ, ಅಥವಾ ಸ್ವಲ್ಪ ಕ್ಷಾರೀಯವೂ ಆಗುತ್ತದೆ. ಮಣ್ಣಿನ ಸ್ಥಿತಿ ಹುಳಿಯಿಂದ ಕ್ಷಾರದತ್ತ ಬದಲಾವಣೆ ಆದ ನಂತರ ಗೊಬ್ಬರ ಬಳಸಿದರೆ ಅದನ್ನು ಸಸ್ಯಗಳು ಸುಭೋಜ್ಯವಾಗಿ ಬಳಸಿಕೊಳ್ಳುತ್ತವೆ. ಜೀರ್ಣ ಶಕ್ತಿ ಸರಿಯಾಗಿ ಇರುವಾಗ ಆಹಾರ ತಿಂದರೆ ಅದು ಶರೀರಕ್ಕೆ ಚೆನ್ನಾಗಿ ತೆಗೆದುಕೊಳ್ಳುತ್ತದೆ ಹಾಗೆಯೇ ಇದೂ ಸಹ. ಮಣ್ಣಿನ ಜೀರ್ಣ ಶಕ್ತಿಯನ್ನು ಉತ್ತಮಪಡಿಸಿ ಪೋಷಕಾಂಶ ನೀಡುವುದು ಒಳ್ಳೆಯ ಕ್ರಮ. ಸಾಗುವಳಿಗೆ ಒಳಪಟ್ಟ ಅಥವಾ ಬೆಳೆ ಬೆಳೆಯುವ ಭೂಮಿಯ ಸಾರಾಂಶಗಳನ್ನು ಬೆಳೆಗಳು ಬಳಕೆ ಮಾಡಿಕೊಂಡಾಗ…