ಕೃಷಿ ಸುಣ್ಣ – ಯಾವುದನ್ನು ಹಾಕಿದರೆ ಹೇಗೆ?
ಪ್ರಾದೇಶಿಕವಾಗಿ ಕೃಷಿ ಸುಣ್ಣದ ನೈಸರ್ಗಿಕ ಮೂಲಗಳು ಬೇರೆ ಬೇರೆ ಇರುತ್ತವೆ. ಸಾಮಾನ್ಯವಾಗಿ ಕರಾವಳಿ ಪ್ರದೇಶದಲ್ಲಿ ಕಪ್ಪೆ ಚಿಪ್ಪಿನಲ್ಲಿ ಸುಣ್ಣದ ಅಂಶ ಇದ್ದರೆ, ಅರೆ ಮಲೆನಾಡು ಮತ್ತು ಮೈದಾನ ಪ್ರದೇಶಗಳಲ್ಲಿ ಸುಣ್ಣದ ಕಲ್ಲುಗಳು, ಡೊಲೋ ಮೈಟ್ ಖನಿಜಗಳು ನೈಸರ್ಗಿಕ ಸುಣ್ಣದ ಮೂಲಗಳಾಗಿವೆ. ಇದಲ್ಲದೆ ಕೆಲವು ಕಾರ್ಖಾನೆಗಳ ತ್ಯಾಜ್ಯಗಳಲ್ಲೂ ಸುಣ್ಣದ ಅಂಶ ಇರುತ್ತದೆ. ಎಲ್ಲಿ ಯಾವುದು ಅಗ್ಗದಲ್ಲಿ ಲಭ್ಯವೋ ಅದನ್ನು ಬಳಕೆ ಮಾಡಬೇಕು. ಬರೇ ಸುಣ್ಣದ ಅಂಶ ಮಾತ್ರ ಇರುವ ಮೂಲವಸ್ತುವನ್ನು ಬಳಕೆ ಮಾಡುವ ಬದಲಿಗೆ ಮೆಗ್ನೀಶಿಯಂ ಸಹ ಇರುವ…