
ಹಣ್ಣು – ತರಕಾರಿ ಬೆಳೆಯುವವರ ಪಾಲಿಗೆ ಪರಮ ವೈರಿ ಈ ನೊಣ.
ಹಣ್ಣು ತರಕಾರಿ ಬೆಳೆಗಾರರು ಬೆಳೆದ ಎಲ್ಲಾ ಉತ್ಪನ್ನಗಳೂ ಹಾಳಾಗದೆ ಉಳಿದರೆ, ಅವರಿಗೆ ಲಕ್ಷ್ಮಿ ಒಲಿದಂತೆ. ಆದರೆ ಈ ಒಂದು ಕೀಟ ಅವರ ಪಾಲಿನ ಪರಮ ವೈರಿ. ದೇವರು ಕೊಟ್ಟರೂ ಅರ್ಚಕ ಬಿಡ ಎಂಬಂತೆ ಈ ಕೀಟ ಸಾಧ್ಯವಾದಷ್ಟೂ ತೊಂದರೆ ಮಾಡಿ ರೈತನ ಪಾಲಿಗೆ ಸಿಂಹ ಸ್ವಪ್ನವಾಗುತ್ತಿದೆ. ನಮ್ಮ ದೇಶವೂ ಸೇರಿದಂತೆ ಪ್ರಪಂಚದಾದ್ಯಂತ ರೈತ ಬೆಳೆದ ಹಣ್ಣು , ತರಕಾರಿಗಳಲ್ಲಿ 50% ಕ್ಕೂ ಹೆಚ್ಚು ಕೀಟಗಳ ಪಾಲಾಗುತ್ತಿವೆ. ಮಾವಿನ ಹಣ್ಣಿಗೆ ಮಾರುಕಟ್ಟೆಯಲ್ಲಿ ಕಿಲೋ 100 ಇರಬಹುದು. ಆದರೆ ರೈತನಿಗೆ…