ಹಾಲು ಖರೀದಿ ನಿಲ್ಲಿಸಿದರೇ ?. ಹೆದರಬೇಡಿ. ಇಲ್ಲಿದೆ ಪರಿಹಾರ.
ಹೈನುಗಾರರು ಉತ್ಪಾದಿಸಿದ ಹಾಲನ್ನು ಸ್ಥಳೀಯ ಉತ್ಪಾದಕ ಖರೀದಿಸುವುದಿಲ್ಲ ಎಂದಾಕ್ಷಣ ಹೈನುಗಾರರು ಯಾಕೆ ಕಂಗಾಲಾಗಬೇಕು. ಹಾಲು ತಾಜಾ ರೂಪದಲ್ಲಿ ಮಾತ್ರ ಮಾರಲು ಇರುವ ವಸ್ತು ಅಲ್ಲ. ಇದರಿಂದ ಬೇರೆ ಬೇರೆ ಉತ್ಪನ್ನಗಳನ್ನೂ ಮಾಡಬಹುದು. ಇದು ಎಲ್ಲಾ ಹೈನುಗಾರರಿಗೂ ತಿಳಿದಿರಬೇಕು. ಯಾವಾಗಲೂ ನಮ್ಮ ರೈತರಿಗೆ ಬೇರೆ ಬೇರೆ ಆಯ್ಕೆಗಳಿರಬೇಕು. ಒಂದೇ ಆಯ್ಕೆ ಆದರೆ ಹೀಗೇ ಆಗುವುದು. ಹಾಲಿನ ಬೇಡಿಕೆ ಕಡಿಮೆಯಾದ ಕಾರಣ, ಅಥವಾ ಹಾಲು ಸಂಗ್ರಹಣೆ ಇಂಥಹ ಸಮಯದಲ್ಲಿ ಕಷ್ಟವಾದ ಕಾರಣ. ಮಹಾಮಂಡಲದ ಆದೇಶದಂತೆ ಹಾಲು ಕೊಳ್ಳುವುದನ್ನು ಸ್ಥಗಿತಗೊಳಿಸಿರಬಹುದು. ಸರಿ…