ಮಂಗ-ಪಕ್ಷಿಗಳಿಂದ ಬೆಳೆ ರಕ್ಷಣೆ.
ಹಣ್ಣು ಹಂಪಲು ಬೆಳೆಯಲ್ಲಿ ಸುಮಾರು 50 % ಕ್ಕೂ ಹೆಚ್ಚು ಹಣ್ಣು ಹಕ್ಕಿ- ಬಾವಲಿ, ಮಂಗ, ಅಳಿಲು ನವಿಲು ಮತ್ತು ಪತಂಗಗಳಿಂದ ಹಾನಿಯಾಗುತ್ತದೆ. ಕೆಲವು ತಿಂದು ಹಾಳಾದರೆ ಮತ್ತೆ ಕೆಲವು ಗಾಯ ಮಾಡಿ ಹಾಳು ಮಾಡುತ್ತವೆ. ಇದನ್ನು ತಡೆಯಲು ಇರುವ ಏಕೈಕ ಉಪಾಯ ಬಲೆ ಹಾಕುವುದು.. ಬಲೆ ಹಾಕುವ ಪದ್ದತಿ ಸುಮಾರು 25-30 ವರ್ಷಗಳಿಂದ ದ್ರಾಕ್ಷಿ ಬೇಸಾಯದಲ್ಲಿ ಚಾಲ್ತಿಯಲ್ಲಿ ಇತ್ತು. ಈಗ ಇದು ಬಹುತೇಕ ಹಣ್ಣಿನ ಬೆಳೆಗಳಲ್ಲಿ ಬಳಸಲ್ಪಡುತ್ತದೆ. ಬಲೆ ಇಲ್ಲದಿದ್ದರೆ ಹಣ್ಣೇ ಇಲ್ಲ. ಬೇಸಿಗೆಯಲ್ಲಿ ಬಹುತೇಕ…