ರಜೆಯ ಈ ದಿನಗಳಲ್ಲಿ ಕಲಿಯಿರಿ – ಸರಳ ಕಸಿ ವಿಧಾನ.
ಈಗ ಕಲಿಯಲು ಬೇಕಾದಷ್ಟು ಬಿಡುವು ಇದೆ. ಇದು ಮಾಡಿ ಕಲಿಯುವ ಸಮಯ. ಯಾರೋ ಕಸಿ ಮಾಡಿದ ಗಿಡವನ್ನು ತಂದು ನೆಡುವ ಬದಲಿಗೆ ನಿಮ್ಮಲ್ಲೇ ಇರುವ ಅನುತ್ಪಾದಕ ಮರಕ್ಕೆ ಕಸಿ ಮಾಡಿ ಅದರಲ್ಲೇ ಫಲ ಪಡೆಯಬಹುದು. ಬಹಳ ಜನ ನಮ್ಮ ಮನೆಯಲ್ಲಿ ಒಂದು ಮಾವಿನ ಮರ ಇದೆ. ಮಾವೇ ಆಗುತ್ತಿಲ್ಲ ಎನ್ನುತ್ತಾರೆ. ಹಾಗೆಯೇ ಲಿಂಬೆ, ಮೂಸಂಬಿ, ನೇರಳೆ, ಗೇರು ಯಾವುದೇ ಅನುತ್ಪಾದಕ ಮರಗಳಿರುವುದೂ ಇದೆ. ಇಲ್ಲಿ ನಾವು ಒಂದು ಮರದಲ್ಲಿ ಹಲವು ಬಗೆಯ ಮಾವು ಪಡೆಯುವ ವಿಧಾನವನ್ನು ತಿಳಿಸುತ್ತಿದ್ದೇವೆ….