ಮಹಾಳಿ ರೋಗಕ್ಕೆ ಮೊಳೆ ಮದ್ದು!
ಒಬ್ಬ ಮಿತ್ರರು ಸಲಹೆ ಕೇಳುತ್ತಾರೆ. ಅಡಿಕೆಯ ಕೊಳೆ ರೋಗ ನಿಯಂತ್ರಣಕ್ಕೆ ಮರದ ಬುಡಕ್ಕೆ ತುಕ್ಕು ಹಿಡಿದ ಮೊಳೆ ಹೊಡೆದರೆ ಆಗುತ್ತದಂತೆ. ಕೇರಳದಲ್ಲಿ ಇದು ಯಶಸ್ವಿಯಾಗಿದೆಯಂತೆ. ಈ ಬಗ್ಗೆ ನಮ್ಮ ಅಭಿಪ್ರಾಯ ಕೇಳುತ್ತಾರೆ. ಮನುಷ್ಯ ತನ್ನೆಲ್ಲಾ ಸಿಟ್ಟನ್ನು ಕೊನೆಗೆ ತೀರಿಸಿಕೊಳ್ಳುವುದು ತನ್ನ ಹೆಂಡತಿಯ ಮೇಲೆ ಎನ್ನುತ್ತಾರೆ ಹಿಂದಿನವರು. ಉಳಿದವರು ಅದಕ್ಕೆ ಪ್ರತಿಕ್ರಿಯಿಸುತ್ತಾರೆ. ಆದರೆ ಹೆಂಡತಿಗೆ ಗಂಡನೇ ದೊಡ್ದದು. ಅದಕ್ಕೆ ಏನು ಮಾಡಿದರೂ ಮಾತಾಡುವುದಿಲ್ಲ. ಆ ಅವಕಾಶವನ್ನು ಗಂಡಸು ಬಳಸಿಕೊಳ್ಳುತ್ತಾನೆ. ಇದರ ಉಲ್ಲೇಖ ಇಲ್ಲಿ ಯಾಕೆಂದರೆ ಯಾವುದಕ್ಕೂ ಪ್ರತಿರೋಧ ಒಡ್ಡದೇ…