ನಿತ್ಯ ಆದಾಯ ಕೊಡುತ್ತದೆ- ಈ ಕೋಳಿ ಸಾಕಣೆ.
ಮಾನವ ಕೃಷಿ ಮಾಡುವಾಗ ಬರೇ ಬೆಳೆ ಒಂದನ್ನೇ ನಂಬಿಕೊಂಡು ಇರಬಾರದು. ಹೀಗಾದರೆ ಅವನು ಸೋಲುತ್ತಾನೆ. ಸಮಗ್ರ ಕೃಷಿ ಎಂಬ ತತ್ವವನ್ನು ಇದಕ್ಕಾಗಿಯೇ ಪರಿಚಯಿಸಲಾಗಿದೆ.. ಅನುಕೂಲ ಮಾಡಿಕೊಂಡು ಹಸು ಸಾಕಣೆ , ಮೀನು ಸಾಕಣೆ, ಕೋಳಿ ಸಾಕಣೆ, ಆಡು ಸಾಕಣೆ ಮಾಡುತ್ತಿದ್ದರೆ ಅದರಿಂದ ಮುಖ್ಯ ಕೃಷಿಗೆ ಅನುಕೂಲವಾಗುತ್ತದೆ. ದೈನಂದಿನ ಆದಾಯಕ್ಕೆ ಹಸು ಸಾಕಣೆ ಅನುಕೂಲವಾದರೆ ವಾರಕ್ಕೆ , ತಿಂಗಳಿಗೆ ಆದಾಯವನ್ನು ಕೋಳಿ ಸಾಕಣೆ ಒದಗಿಸಿಕೊಡುತ್ತದೆ. ಕೃಷಿ ಪೂರಕ ಆಗಿರಲಿ: ಕೋಳಿ ಸಾಕಣೆಯಲ್ಲಿ ಮೊಟ್ಟೆ ಕೋಳಿ ಹಾಗೂ ಮಾಂಸದ ಕೋಳಿ…