ಗೇರು – ಮಾವು- ಹಲಸು ಹಳೆ ಮರಗಳಿಗೆ ಪುನಃಶ್ಚೇತನ.
ನಮ್ಮಲ್ಲಿ ಇರುವಂತಹ ಹಳೆಯ ಮಾವು- ಗೇರು-ಹಲಸು ಇನ್ಯಾವುದೇ ಹಣ್ಣಿನ ತೊಟಗಳಲ್ಲಿ ಹೆಚ್ಚಿನವುಗಳು ಅನಾಮಧೇಯ ತಳಿಯ ಬೀಜಗಳಿಂದ ಆದವುಗಳು. ಇವು ಈಗಲೇ ಹಳೆಯದಾಗಿ ಅನುತ್ಪಾದಕವೂ ಆಗಿರಬಹುದು. ಇಂತಹ ಮರಗಳು ಹೆಚ್ಚಾಗಿ ನಿರ್ವಹಣೆ ಇಲ್ಲದೇ ನಿರ್ಲಕ್ಷ್ಯದಿಂದ ಬೆಳೆದಿರುತ್ತವೆ. ಇವುಗಳನ್ನು ಇಳುವರಿ ಅಭಿವೃದ್ಧಿಯ ದೃಷ್ಟಿಯಿಂದ ಪುನಶ್ಚೇತನ ಮಾಡುವುದು ಉತ್ತಮ. ಹಳೆಯ ಅಥವಾ ಕಡಿಮೆ ಇಳುವರಿ ಕೊಡುವಂತಹ ಮರಗಳನ್ನು ಸವರುವಿಕೆಯಿಂದ ಹಾಗು ಕಸಿ ವಿಧಾನದ ಮೂಲಕ ಪುನಶ್ಚೇತನಗೊಳಿಸಿದರೆ ಹೊಸ ಮರವನ್ನಾಗಿ ಪರಿವರ್ತಿಸಬಹುದು. ಪುನಶ್ಚೇತನದ ಉದ್ದೇಶಗಳು : ಹಳೆಯ ಹಾಗೂ ಕಡಿಮೆ ಇಳುವರಿಯ ಗಿಡಗಳ…